ಅರಿಷಡ್ವರ್ಗ : ಮನುಷ್ಯನ ಮನಶ್ಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಪತಿಬಂಧಕರೂಪ
ವಾಗಿರುವ ಭಾವನೆಗಳನ್ನು ಶತ್ರುಳೆಂದು (ಅರಿ) ಬಗೆದು, ಅವನ್ನು ಆರು ಗುಂಪಾಗಿ
ವರ್ಗೀಕರಣ ಮಾಡುತ್ತಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಇವೇ
ಅರಿಷಡ್ವರ್ಗಗಳು. ಇವನ್ನು ಕಾಮಕ್ರೋಧ, ಲೋಭಮೋಹ, ಮದಮಾತ್ಸರ್ಯಎಂದು
ಮತ್ತೆ ದೀರ್ಘವಾಗಿ ವಿಂಗಡಿಸುವ ಪದ್ಧತಿಯೂ ಉಂಟು. ಯೋಗಿಯಾದವ ಈ ಆರನ್ನೂ
ಜಯಿಸಬೇಕು. ಇವು ಆರೂ ಅಂತಃಶತ್ರುಗಳೆಂದು ಕಲ್ಪನೆ. ಇವನ್ನು ಗೆದ್ದರೆ ಮನುಷ್ಯ ಲೋಕವನ್ನೇ
ಗೆದ್ದಂತೆ; ಇವನ್ನು ಗೆಲ್ಲದೆ ಲೋಕವನ್ನೇ ಗೆದ್ದರೂ ಪರಾಜಿತನಾದಂತೆಯೇ. ಇವೆಲ್ಲವೂ
ರಜೋಗುಣದಿಂದ ಉಂಟಾದುವೆಂದೂ ಇವನ್ನು  ಧೃತಿಯಿಂದ ಗೆಲ್ಲಬೇಕೆಂದೂ ಅಧಿಕಾರವಿಧಿ
ಹೇಳುತ್ತದೆ. ಚತುರ್ವಿಧ ಸಾಧನೆಗಳು ಈ ಅರಿಷಡ್ವರ್ಗಗಳನ್ನು ಜಯಿಸುವ ಸಲುವಾಗಿಯೇ
ನಿಂತಿವೆ. (ನೋಡಿ- ಸಾಧನೆಗಳು -ಚತುರ್ವಿಧ)

(ಎಸ್.ಕೆ . ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ